Jan 25 2024 to Jan 25 2024 4 p.m.
EVENT HAS ENDED
7 4th Main Rd, Stage 2, Domlur 560071
ಅವಧಿ: 65 ನಿಮಿಷ ಶೇಕ್ಸ್‌ಪಿಯರನ ಬದುಕನ್ನು ಹಾಗೂ ಅವನ ಹೆಂಡತಿಯನ್ನು ಕುರಿತಂತೆ ದೊರೆತಿರುವ ಖಚಿತವಾದ ಮಾಹಿತಿಗಳು ಅತ್ಯಲ್ಪವೇ ಆದರೂ, ಶೇಕ್ಸ್ ಪಿಯರನಿಗಿಂತ ಎಂಟುವರ್ಷ ಹಿರಿಯಳು ಎಂಬ ಒಂದೇ ಕಾರಣಕ್ಕಾಗಿ ಆನಾ ಹ್ಯಾತ್‌ವೇ ಬಹಳಷ್ಟು ಶೇಕ್ಸ ಪಿಯರ್ ಭಕ್ತರ, ವಿಮರ್ಶಕರ ಅವಕೃಪೆಗೆ ಒಳಗಾಗಿದ್ದಾಳೆ. ಮದುವೆಯಾದ ೨-೩ ವರ್ಷಗಳಲ್ಲೇ ಶೇಕ್ಸ ಪಿಯರ್ ಅವಳನ್ನು ಬಿಟ್ಟು ಲಂಡನ್ನಿಗೆ ತೆರಳಿದ್ದಕ್ಕೆ ಕಾರಣ ಅವಳೊಂದಿಗೆ ಬದುಕು ಅಸಹನೀಯವಾಗಿದ್ದು ಎಂದೇ ಅವರ ಅಂಬೋಣ. ಅವರ ದೃಷಿಯಲ್ಲಿ ಶೇಕ್ಸ್ ಪಿಯರನ ನಾಟಕಗಳಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಕೆಟ್ಟ, ಬಜಾರಿ ಹೆಣ್ಣು ಪಾತ್ರಗಳಿಗೆ ಅವಳೇ ಮಾದರಿ. ಖ್ಯಾತ ಸ್ತ್ರೀವಾದಿ ಚಿಂತಕಿ ಜರ್ಮೇನ್ ಗ್ರೆಯರ್‌ಳ ಸಂಶೋಧನಾ ಕೃತಿ ʼಶೇಕ್ಸ ಪಿಯರ್ಸ್ ವೈಫ್ʼ , ರಾಬರ್ಟ ನೈ ಅವರ ಕಾದಂಬರಿ ʼಮಿಸೆಸ್ ಶೇಕ್ಸ್ ಪಿಯರ್ʼ, ಹಾಗೂ ಶೇಕ್ಸ್ ಪಿಯರನ ಸಾನೆಟ್ ಗಳಿಂದ ಪ್ರೇರಿತವಾದ ಏಕವ್ಯಕ್ತಿ ರಂಗಪ್ರಯೋಗ ʼಶೇಕ್ಸ್ ಪಿಯರನ ಶ್ರೀಮತಿʼ, ಆನಾ ಹ್ಯಾತ್‌ವೇ ಹಾಗೂ ಶೇಕ್ಸ ಪಿಯರನ ದಾಂಪತ್ಯವನ್ನು ಬೇರೊಂದು ದೃಷ್ಟಿಕೋನದಿಂದ ನೋಡುವ ಪ್ರಯತ್ನ. ಉದಯ ಇಟಗಿ ಅವರು ರಚಿಸಿರುವ ಈ ನಾಟಕವನ್ನು ವಿಶ್ವರಾಜ್ ಪಾಟೀಲರ ನಿರ್ದೇಶನದಲ್ಲಿ ನಿಮ್ಮ ಮುಂದೆ ಅಭಿನಯಿಸಲಿದ್ದಾರೆ ಖ್ಯಾತ ಕಲಾವಿದೆ ಲಕ್ಷ್ಮಿ ಚಂದ್ರಶೇಖರ್. ಗಜಾನನ ನಾಯಕ್ ಅವರ ಧ್ವನಿಸಂಯೋಜನೆ, ಎನ್ ಮಂಗಳಾರವರ ವಸ್ತ್ರವಿನ್ಯಾಸ, ವಿಶ್ವನಾಥ್ ಮಂಡಿ ಯವರ ರಂಗಸಜ್ಜಿಕೆ, ರಾಮಕೃಷ್ಣ ಕನ್ನರಪಾಡಿಯವರ ಪ್ರಸಾಧನ ಇವು ನಾಟಕಕ್ಕೆ ಮೆರಗು ನೀಡಿವೆ. ಶೇಕ್ಸ್ ಪಿಯರನ ಹುಟ್ಟುಹಬ್ಬದ ಸಂದರ್ಭದಲ್ಲಿಯೇ ರಂಗಶಂಕರದಲ್ಲಿ ಮೊದಲ ಪ್ರದರ್ಶನ ಕಂಡ ಈ ನಾಟಕ, ಈಗಾಗಲೇ ಅನೇಕ ಮರುಪ್ರದರ್ಶನಗಳನ್ನು ಕಂಡಿದೆ. ಶೇಕ್ಸ ಪಿಯರನ ಜೀವನಗಾಥೆಯನ್ನು ಬರೆದ ಒಬ್ಬ ಪಂಡಿತರೇ ಹೇಳುವಂತೆ ʼಶೇಕ್ಸ ಪಿಯರನ ಪ್ರತಿ ಜೀವನಗಾಥೆಯಲ್ಲೂ ೫% ಮಾತ್ರ ಸತ್ಯ, ಉಳಿದದ್ದು ಊಹಾಪೋಹʼ. ʼನಮ್ಮ ನಾಟಕದಲ್ಲಿ ಖಂಡಿತ ೫% ಗಿಂತ ಹೆಚ್ಚು ಸತ್ಯವಿದೆʼ ಎನ್ನುತ್ತಾರೆ ಕ್ರಿಯೆಟಿವ್ ಥಿಯೇಟರ್ ತಂಡದ ಸದಸ್ಯರು. ಕ್ರೆಡಿಟ್ಸ್: ರಚನೆ: ಉದಯ ಇಟಗಿ ವಿನ್ಯಾಸ ಮತ್ತು ನಿರ್ದೇಶನ: ಡಾ. ವಿಶ್ವರಾಜ ಪಾಟೀಲ್ ಸೆಟ್ಸ್ ಮತ್ತು ಪ್ರಾಪ್ಸ್: ವಿಶ್ವನಾಥ ಮಂಡಿ ವೇಷಭೂಷಣ: ಮಂಗಳ ಎನ್, ಶಿಲ್ಪಾ ಧ್ವನಿ: ಗಜಾನನ ಟಿ ನಾಯಕ್ ಬೆಳಕು: ಮುದ್ದಣ್ಣ ರಟ್ಟೇಹಳ್ಳಿ ಮೇಕಪ್: ರಾಮಕೃಷ್ಣ ಕನ್ನರಪಾಡಿ ರಂಗಪ್ರಬಂಧನ: ಗೌತಮ್ ಉಪಾಧ್ಯ ಅಭಿನಯ: ಲಕ್ಷ್ಮಿ ಚಂದ್ರಶೇಖರ್ ನಾಟಕದ ಇಂಗ್ಲಿಷ್ ಆವೃತ್ತಿಯು ಸಾಯಂಕಾಲ 7:00 ಗಂಟೆಗೆ ನಡೆಯುತ್ತದೆ ಕಲಾವಿದೆ ಲಕ್ಷ್ಮೀ ಚಂದ್ರಶೇಖರ್ ಅನುವಾದಕರು ಹಾಗು ಅಭಿನೇತ್ರಿ ಲಕ್ಷ್ಮೀ ಚಂದ್ರಶೇಖರ್ ಅವರು ಕನ್ನಡ ರಂಗಭೂಮಿ ಮತ್ತು ದೂರದರ್ಶನ ಕ್ಷೇತ್ರದ ಪ್ರಸಿದ್ಧ ಕಲಾವಿದರು. ಅವರು ೧೯೫೦ರ ಏಪ್ರಿಲ್ ೨೧ರಂದು ಹಾಸನ ಜಿಲ್ಲೆಯಲ್ಲಿ ಜನಿಸಿದರು. ಶಾಲಾ ವಿದ್ಯಾಭ್ಯಾಸ ಚನ್ನರಾಯಪಟ್ಟಣದಲ್ಲಿ ನೆರವೇರಿತು, ನಂತರ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷಿನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಕಾಲೇಜು ದಿನಗಳಿಂದಲೇ ರಂಗಭೂಮಿಗೆ ಆಕರ್ಷಿತರಾದ ಅವರು ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಸಮುದಾಯ ತಂಡದೊಡನೆ ಹಲವಾರು ವರ್ಷಗಳ ಕಾಲ ರಂಗಕ್ರಿಯೆಯಲ್ಲಿ ತೊಡಗಿಕೊಂಡಿದ್ದ ಅವರು ಕಳೆದೆರಡು ದಶಕಗಳಿಂದ ಕ್ರಿಯೇಟಿವ್ ಥಿಯೇಟರ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರಡಿಯಲ್ಲಿ ಹಲವಾರು ಏಕವ್ಯಕ್ತಿ ನಾಟಕಗಳೂ ಸೇರಿದಂತೆ ಹತ್ತಾರು ಜನಪ್ರಿಯ ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಅವರ ಕಲಾಪ್ರತಿಭೆ ಮತ್ತು ಸಾಧನೆಗಳು ಅನೇಕರಿಗೆ ಪ್ರೇರಣೆಯಾಗಿವೆ.