Home | Books | ಪುಸ್ತಕಗಳ ಲೋಕಾರ್ಪಣೆ | Book Release ಶಿಕ್ಷಣದ ಸಂವಾದ A Dialogue on Education

ಪುಸ್ತಕಗಳ ಲೋಕಾರ್ಪಣೆ | Book Release ಶಿಕ್ಷಣದ ಸಂವಾದ A Dialogue on Education

Details

Nov 10 2024 to Nov 10 2024 3 p.m.

EVENT HAS ENDED

Where

Bangalore International Centre

7 4th Main Rd, Stage 2, Domlur 560071

Event Description

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ವಿವಿಧ ಪ್ರಕಾಶನ ಸಂಸ್ಥೆಗಳ ಸಹಯೋಗದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಆರು ಮೌಲಿಕವಾದ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸುತ್ತಿದೆ. ಭಾಷೆ ಮತ್ತು ಭಾಷಾ ಬೋಧನೆಗೆ ಸಂಬಂಧಿಸಿದ “ನುಡಿ ಕಲಿಸುವ ನೂರು ದಾರಿ” ಸಂಪುಟ ೩ ಮತ್ತು ೪ (ಸಹಯೋಗ: ಕನ್ನಡ ವಿಶ್ವವಿದ್ಯಾಲಯ, ಹಂಪಿ), ಮಗುವಿನ ಕಲಿಕೆಯನ್ನು ಕುರಿತ ಕಮಲ ವಿ. ಮುಕುಂದ ಅವರ “ಇವತ್ತು ಶಾಲೆಯಲ್ಲಿ ನೀನೇನು ಪ್ರಶ್ನೆ ಕೇಳಿದೆ?”- ೧ ಮತ್ತು ೨ ಕೈಪಿಡಿಗಳು (ಸಹಯೋಗ: ನವಕರ್ನಾಟಕ ಪಬ್ಲಿಕೇಷನ್ಸ್‌), ಮನೋವಿಜ್ಞಾನದ ಇತಿಹಾಸ ಮತ್ತು ಬೆಳವಣಿಗೆಯನ್ನು ಕುರಿತ ಇಂದಿರಾ ಜೈಪ್ರಕಾಶ್ ರವರ “ಮನೋವಿಜ್ಞಾನ – ಬೇರುಗಳು, ಶಾಖೆಗಳು” (ಸಹಯೋಗ: ವಂಶಿ ಪ್ರಕಾಶನ), ಹಾಗೂ ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ರಚನೆ ಮತ್ತು ಬೋಧನೆಯನ್ನು ಕೇಂದ್ರೀಕರಿಸಿ ಅಲೆಕ್ಸ್‌ ಎಂ.ಜಾರ್ಜ್‌ ಮತ್ತು ಅಮನ್‌ ಮದಾನ್‌ ರಚಿಸಿರುವ “ಶಾಲೆಗಳಲ್ಲಿ ಸಮಾಜ ವಿಜ್ಞಾನದ ಬೋಧನೆ” (ಸಹಯೋಗ: ಅಮೂಲ್ಯ ಪುಸ್ತಕ) ಬಿಡುಗಡೆಗೊಳ್ಳುತ್ತಿರುವ ಪುಸ್ತಕಗಳು. ಪ್ರೊಫೆಸರ್ ಓ.ಎಲ್.ನಾಗಭೂಷಣಸ್ವಾಮಿಯವರ ಅಧ್ಯಕ್ಷತೆಯಲ್ಲಿ ಮಾಧವ  ಪೆರಾಜೆ, ಅರವಿಂದ ಚೊಕ್ಕಾಡಿ, ಮತ್ತು ಅಶೋಕ್‌ ಎಚ್.ಎಸ್. ಪುಸ್ತಕಗಳ ಬಗ್ಗೆ ಮಾತನಾಡಲಿದಾರೆ.

Azim Premji University in collaboration with various publishing houses is releasing six books related to education. The books being released are: “Nudi Kalisuva Nooru Daari” Volumes 3 and 4 related to Language and Language Teaching (Collaboration: Kannada University, Hampi), Kamala V. Mukunda’s “What Did You Ask in School Today?” – Handbooks 1 and 2 on Child Learning (Collaboration: Navakarnataka Publications), “Psychology – Roots, Branches” by Indira Jaiprakash on the history and evolution of psychology (Collaboration: Vamshi Prakashana), and “Teaching Social Science in Schools” by Alex M. George and Amman Madan (Collaboration: Amulya Pustaka) focused on the creation and teaching of social science textbooks.

Madhava Peraje, Aravinda Chokkadi, and Ashok H.S. will talk about the books, to be launched by Prof.O.L.Nagabhushanaswamy.

Speakers
ಓ. ಎಲ್‌ ನಾಗಭೂಷಣ ಸ್ವಾಮಿ | O L Nagabhushanaswami
Critic & Translator

ವಿಮರ್ಶಕರು ಮತ್ತು ಅನುವಾದಕರು. ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂ.ಎ. ಮತ್ತು  ಕನ್ನಡ ಎಂ.ಎ ಪದವಿ ಪಡೆದಿದ್ದಾರೆ. ವಿವಿಧ ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕ ವೃತ್ತಿ ನಿರ್ವಹಿಸಿರುವ ಇವರು, ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಾರೆ.

ನಕ್ಷತ್ರಗಳು, ವಿಮರ್ಶೆಯ ಪರಿಭಾಷೆ, ನನ್ನ ಹಿಮಾಲಯ, ಅಲ್ಲಮ ವಚನ ಸಂಗ್ರಹ, ಇಂದಿನ ಹೆಜ್ಜೆ, ಏಕಾಂತ ಲೋಕಾಂತ, ನುಡಿಯೊಳಗಾಗಿ ಇವರ ಪ್ರಮುಖ ಕೃತಿಗಳಾಗಿವೆ. ಅಲ್ಲದೇ, ಜಿಡ್ಡು ಕೃಷ್ಣಮೂರ್ತಿ, ಚೆಕಾವ್‌ನ ನಾಟಕ, ರೈನರ್ ಮಾರಿಯಾ ಟಾಲ್ಸ್ಟಾಯ್ ಇವರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದರೆ, ಕನ್ನಡದಿಂದ ಚಂದ್ರಶೇಖರ ಕಂಬಾರ, ಬೆಳೆಗೆರೆ ಕೃಷ್ಣಶಾಸ್ತ್ರೀ ಜಿ. ಎಸ್. ಶಿವರುದ್ರಪ್ಪ ಅವರ ಆಯ್ದ ಕವಿತೆಗಳು ಮತ್ತು ವಚನಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ, ವಿಮರ್ಶೆಯ ಪರಿಭಾಷೆ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ, ಜಿ.ಎಸ್.ಎಸ್. ಪ್ರಶಸ್ತಿಗಳು ಸೇರಿದಂತೆ ಹಲವು ಪ್ರಶಸ್ತ್ರಿಗಳನ್ನು ಪಡೆದಿದ್ದಾರೆ.

O L Nagabhushanaswami is a critic and translator. He has obtained English MA and Kannada MA degree from Mysore University. He has served as English professor in various colleges and has also worked as a professor and head of Translation department of Kannada University.

Nakshtragalu, Vimarsheya paribhashe, Nanna Himalaya, Allama vachana sangraha, indina hejje, Ekanta lokanta, Nudiyolagagi are his significant works. Apart from this he has translated article of Jiddu Krishnamurthi, Chekov’s Play, Rainer Maria Tolstoy into Kannada and has translated chosen poems and vachanas of Chandrashekar Kambar, Belegere Krishnashastri and G S Shivarudrappa into English.

He has received many awards including Karnataka Sahitya Academy Award, Kendra Sahitya Academy’s translation Award, Karnataka Sahitya Academy Award for his work Vimarsheya Paribhashe, Rajyotsava Award and G S S Award.
ಅಶೋಕ್ ಎಚ್.ಎಸ್| Ashok H S
Professor, Arts, Humanitarian Science and Social Science Department, Chanakya University, Bengaluru

ವರ್ಷಗಳ ಕಾಲ ಬೆಂಗಳೂರು ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದಲ್ಲಿ  ಪ್ರಾಧ್ಯಾಪಕ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ಕಲಾ, ಮಾನವಶಾಸ್ತ್ರ ಮತ್ತು ಸಮಾಜ ವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತೀಯ ಮಾನವಶಾಸ್ತ್ರದಲ್ಲಿ ತೌಲಿಕ ಅಧ್ಯಯನ, ಪೂರ್ವ ಮತ್ತು ಪಾಶ್ಚಾತ್ಯ ದೃಷ್ಟಿಕೋನಗಳಲ್ಲಿ ಸಿದ್ದಾಂತಗಳ ಪರಸ್ಪರ ಹೋಲಿಕೆ, ಪ್ರೇರಣೆ ಮತ್ತು ಮೌಲ್ಯಗಳ ಮೇಲೆ ಪೂರ್ವ ಮತ್ತು ಪಾಶ್ಚಾತ್ಯ ದೃಷ್ಟಿಕೋನಗಳ ಹೋಲಿಕೆ, ಸಂಸ್ಕೃತ ಮತ್ತು ಗಣಿತದ ಕಲಿಕೆಯಲ್ಲಿ ಪುರಾತನ ಮತ್ತು ಆಧುನಿಕ ಶಿಕ್ಷಣದ ಹೋಲಿಕೆ ಅಧ್ಯಯನಗಳು ಇವರ ಆಸಕ್ತಿ ಕ್ಷೇತ್ರಗಳಾಗಿವೆ.

Dr. Ashok has worked as a professor in Psychology Department of Bangalore University for 35 years before retiring. Currently he is working as a professor in Arts, Humanitarian Science and Social Science Department at Chanakya University, Bengaluru. Comparative Studies in Indian humanitarian Science, Mutual comparison between Eastern and western viewpoints, Comparison of East and western viewpoints on motivation and values and Comparison between ancient and modern education in Sanskrit and Mathematical Learning are his areas of interests.
ಅರವಿಂದ ಚೊಕ್ಕಾಡಿ | Aravind Chokkadi
Educator, Morarji Desai Residential School, Mundaje

ವಿದ್ಯಾರ್ಥಿಯಾಗಿದ್ದಾಗ ರಾಜ್ಯ ಮಟ್ಟದ ರ್‍ಯಾಂಕ್ ಪಡೆದಿದ್ದ ಅರವಿಂದ ಚೊಕ್ಕಾಡಿಯವರು ದೊರಕಿದ ಇತರ ಉದ್ಯೋಗಗಳನ್ನು ತಿರಸ್ಕರಿಸಿ, ಬಯಸಿ ಪ್ರೌಢ ಶಾಲಾ ಅಧ್ಯಾಪಕರಾದವರು. ಪ್ರಸ್ತುತ ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿಯೂ ಆಗಿರುವ ಇವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನೂ ಕೊಡುತ್ತಾರೆ. ಇವರ ‘ಬದುಕಿಗಾಗಿ ಶಿಕ್ಷಣ‘ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಅರಳು ಪ್ರಶಸ್ತಿ, ‘ಇಲ್ಲದ ತೀರದಲ್ಲಿ‘ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪುರಸ್ಕಾರಗಳು ಬಂದಿವೆ. ಅರ್ಥಶೋಧ, ಅನ್ವಯ, ಮೂರನೆಯ ಇರವು, ಕಲಿಕೆಯ ನಡೆ, ಉಪನಿಷತ್ ಪರಿಚಯ, ಗಾಂಧಿ: ಮೌಲ್ಯಗಳ ನಡುವಿನ ಮೌನ ಮುಂತಾದವು ಆರ್ಥಿಕ, ಶೈಕ್ಷಣಿಕ ಮತ್ತು ಸಂಸ್ಕೃತಿ ಚಿಂತನೆಯ ಕೃತಿಗಳಾಗಿವೆ. ಕ್ಷಮತೆ, ಬ್ರಹ್ಮಶ್ರೀ ನಾರಾಯಣ ಗುರು ಮುಂತಾದ ವ್ಯಕ್ತಿತ್ವ ಚಿತ್ರಣಗಳನ್ನು ಬರೆದಿರುವ ಇವರು ಮಹಾಭಾರತ ಪಾತ್ರ ಪರಿಚಯ, ಯುವ ಮನಸಿನ ಮೆಟ್ಟಿಲು, ಮಕ್ಕಳಿಗೆ ಮೌಲ್ಯ ಶಿಕ್ಷಣ, ಜೀವನ ಕೌಶಲಗಳು, ವಿದ್ಯಾರ್ಥಿ ವಿಕಾಸ ಮುಂತಾದ ಕೃತಿಗಳನ್ನು ಮಕ್ಕಳಿಗಾಗಿ ಬರೆದಿದ್ದಾರೆ. ಮುಕ್ತ ಹಂಸ, ಎರಡು ತಲೆಮಾರು, ಇದು ನಮ್ಮ ಕರ್ನಾಟಕ ಸಂಪಾದನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ.‘ವಸ್ತು‘ ಇವರ ಸಾಹಿತ್ಯ ಅಧ್ಯಯನ ಕೃತಿ,’ ಕೊಡಗು ಮತ್ತು ಕರಾವಳಿಯಲ್ಲಿ ಜನತಾ ಬಂಡಾಯ:1834-37′ ಸಂಶೋಧನಾ ಕೃತಿ. ‘ ಬಿಟ್ಟರೆ ಸಿಕ್ಕದ್ದು‘ ಇವರ ಹಾಸ್ಯ ಬರಹಗಳ ಸಂಕಲನವಾಗಿದೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡನೆಗಳನ್ನು ಮಾಡಿರುವ ಇವರ ಬರಹಗಳು ವಿವಿಧ ವಿಶ್ವ ವಿದ್ಯಾನಿಲಯಗಳ ಪಠ್ಯಗಳಿಗೆ ಸೇರಿವೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕರಾಗಿರುವ ಇವರು ಆಕಾಶವಾಣಿ, ದೂರದರ್ಶನ ಮತ್ತು ಇತರ ಮಾಧ್ಯಮಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ. ಗಾಂಧಿ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಇವರು ಬಿಡುವಿನ ವೇಳೆಯಲ್ಲಿ ಕಳೆದು ಹೋಗುತ್ತಿರುವ ಸಂವಾದ ಸಂಸ್ಕೃತಿಯನ್ನು ಪೋಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರಧಾನ ಮಂತ್ರಿಯವರ ‘ಅನ್ ಸಂಗ್ ಹೀರೋಸ್ ಆಫ್ ಇಂಡಿಯನ್ ಹಿಸ್ಟರಿ‘ ಮಾಲಿಕೆಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾವು ಪ್ರಕಟಿಸಿದ ಅರವಿಂದ ಚೊಕ್ಕಾಡಿಯವರ ‘ಅಜ್ಞಾತ ಸಂತ ಹರ್ಡೇಕರ ಮಂಜಪ್ಪ‘ ಪುಸ್ತಕವು ನವದೆಹಲಿಯಲ್ಲಿ ನಡೆದ ವಿಶ್ವ ಪುಸ್ತಕ ಮೇಳದಲ್ಲಿ ಬಿಡುಗಡೆಯಾಗಿದೆ.

A state level rank holder in his student days, Aravinda Chokkadi refused all other jobs that were offered to him to become a high school teacher by his own will. He is currently working at Morarji Desai Residential School at Mundaje. Also an education resource person, he also gives training for competitive exams. His work ‘Badukigagi Shikshana’ has received ‘Aralu Award’ from Kannada Sahitya Parishat and his another work ‘Illada Teeradalli’ has received Karnataka Sahitya Academy Pustaka Award. Arthashodha, Anvaya, Mooraneya Iravu, Kalikeya Nade, Upanishat Parichaya, Gandhi:moulyagala naduvina mouna and so on are his works of economic, educational and cultural ideas. He has written personality descriptions like Kshamate, Brahmashree Narayana Guru and so on and has written Mahabharatha Patra Parichaya, Yuva manasina mettilu, Makkalige moulya shikshana, Jeevana koushalagalu, Vidyarthi Vikasa and so on for students.  He has published compilations books Mukta Hamsa, Eradu Talemaru and Idu Namma Karnataka. ‘Vastu’ is his work on literature study; Kodagu mattu Karavaliyalli Janata Bandaya: 1834-37 is his research work. ‘Bittare Sikkaddu’ is his compilation of comedy literature. He has presented his papers at Akhila Bharateeya Sahitya Sammelanas and many National and International Seminars and they have been included in the curriculum of many universities. He is the organizer of many cultural programs and has conducted programs in Akashavani, Dooradarshan and many other media. He is the chief secretary of Gandhi Vichara Vedike and is busy in nurturing the dwindling interaction culture in his free time. Aravinda Chokkadi’s book ‘Ajnaata santa Hardekara Manjappa’ published by National Book Trust of India under our Prime Ministers’ ‘Unsung heroes of Indian History’ series was released in world book fair conducted in New Delhi.
ಮಾಧವ ಪೆರಾಜೆ | Madhava Peraje
Professor, Dravida Culture Studies Department, Hampi Kannada University

ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ದ್ರಾವಿಡ ಸಂಸ್ಕ್ರತಿ ಅಧ್ಯಯನ ವಿಭಾಗ ಪ್ರಾಧ್ಯಾಪಕರು ಮತ್ತು ಪ್ರಸಾರಂಗದ ನಿರ್ದೇಶಕರು ಆಗಿರುವ  ಇವರು ಎಂ.ಎ. ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯ, ಎಂ.ಫಿಲ್ ಹಾಗೂ ಪಿಎಚ್‌.ಡಿ. ಪದವಿಯನ್ನು ಹಂಪಿ  ಕನ್ನಡ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಕನ್ನಡ ವಿಮರ್ಶೆ, ದೇಸಿ ಸಂಸ್ಕ್ರತಿ ಹಾಗೂ ದ್ರಾವಿಡ ಅಧ್ಯಯನ ಭಾಷಾ ವಿಜ್ಞಾನ, ಭಾಷಾಂತರ ಇವರ ಆಸಕ್ತಿ  ಕ್ಷೇತ್ರಗಳು. ಪರಿಭಾಷೆ, ತೌಲನಿಕ ದ್ರಾವಿಡ, ಡೆರಿಡಾ, ಪಂಪ ಪೂರ್ವ ಕನ್ನಡ ಕವಿಗಳು, ಪ್ರಾಚೀನ ಕನ್ನಡ ಸಾಹಿತ್ಯವು ಅನುವಾದವೇ?, ಇವು ಚೆಲವು ತರು (ಧರ್ಮಪಾಲ್‌ ಅವರ ದಿ ಬ್ಯೂಟಿಫುಲ್‌ ಟ್ರೀ ಕೃತಿಯ ಅನುವಾದ) ಪ್ರಕಟಿತ ಕೃತಿಗಳು. ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಯಕ್ಷಗಾನ ಪದಕೋಶ ರಚಿಸಿ, ಪ್ರಕಟಿಸಿದ್ದಾರೆ. ಇವರಿಗೆ ಎರಡು ಬಾರಿ ಕರ್ನಾಟಕ ಸಾಹಿತ್ಯ  ಅಕಾಡೆಮಿ ಪುಸ್ತಕ ಪ್ರಶಸ್ತಿ, ದೊರೆತಿವೆ.

Dr. Madhava Peraje is a professor in Dravida Culture studies department of Hampi Kannada University and the director of Prasaranga. He obtained his MA degree from Mangalore University, M.Phil and Ph.D. from Hampi Kannada University. His areas of interest are Kannada Criticism, Desi Culture and Dravida Study, Linguistics and Translation. Paribhaashe, toulanika Dravida, Derida, Pampa poorva kannada kavigalu, Pracheena Kannada Sahityavu anuvadave?, Ivu cheluvu taru ( Translation of The Beautiful Tree by Dharampal). He has written and published Yakshagana Dictionary for Kannada saahitya parishat. He has received Karnataka Sahitya Academy Award twice.

 

 


Upcoming events in Bangalore International Centre