Home | others | Jayant Kaikini at RS Connect's 'Celebrating Books' Programme

Jayant Kaikini at RS Connect's 'Celebrating Books' Programme

Details

Sep 26 2021 to Sep 26 2021 11 a.m.

EVENT HAS ENDED

Where

Ranga Shankara

36/2, 8th Cross Rd, R K Colony, 2nd Phase, J. P. Nagar 560078

Event Description

"ಆಧುನಿಕ ಬದುಕಿನ ಆತಂಕಗಳನ್ನು ಕಥೆಯಾಗಿಸುವ ಜಯಂತ ಕಾಯ್ಕಿಣಿ ಅವರು ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರು. 'ಕಥೆಗಾರ' ಎಂಬ ವಿಶೇಷಣವಿದೆಯಾದರೂ ಅವರೊಬ್ಬ ಪ್ರಮುಖ ಕವಿ ಕೂಡ ಹೌದು. ಪ್ರಬಂಧ, ಅಂಕಣ ಬರಹ, ಚಲನಚಿತ್ರ ಸಂಭಾಷಣೆ ಮತ್ತು ಗೀತ ರಚನೆ ಹೀಗೆ ಹಲವು ಪ್ರಕಾರಗಳಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ಇವರ ಹಲವಾರು ಕವನ ಸಂಕಲನಗಳು, ಕಥಾ ಸಂಕಲನಗಳು, ನಾಟಕಗಳು ಪ್ರಕಟವಾಗಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಿಎಚ್‌ ಶ್ರೀಧರ್ ಕಥಾ ಪ್ರಶಸ್ತಿ, ದಿನಕರ ದೇಸಾಯಿ ಕವನ ಪ್ರಶಸ್ತಿಗಳ ಜೊತೆಗೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ."
- ಬುಕ್‌ ಬ್ರಹ್ಮ  

"ಚಿತ್ರಿಕೆಗಳ ಮುಖಾಂತರ ಕಥೆ ಕಟ್ಟುವ ಜಯಂತ, ಕಥೆಗಳ ಮಟ್ಟಿಗೆ ರೂಪಕ ಚಕ್ರವರ್ತಿ. ವಾಚಾಳಿಯಾಗದೇ ಎಲ್ಲವನ್ನೂ ಧ್ವನಿಸುವ ಕಥನಕ್ರಮ ಅವರದು. ಮುಂಬಯಿಯನ್ನು ಕುರಿತು ಅವರಷ್ಟು ಅವರಂತೆ ಬರೆದ ಮತ್ತೊಬ್ಬ ಲೇಖಕ ಇಲ್ಲ. ಅವರ ಮುಂಬಯಿ ಭಾರತದ ಎಲ್ಲಿ ಬೇಕಾದರೂ ಎದುರಾಗಬಹುದು ಕೂಡ. ಸ್ಥಿತಿಗಿಂತ ಗತಿ ಮುಖ್ಯ, ಕಾಣುವುದಕ್ಕಿಂತ ಕಾಣ್ಕೆ ಮುಖ್ಯ, ಪದಗಳಿಗಿಂತ ಪದ್ಯ ಮುಖ್ಯ, ಅನುಭವಿಸುವುದಕ್ಕಿಂತ ಭವಿಸುವುದು ಅನಿವಾರ್ಯ ಎಂದು ನಂಬಿದ ಜಯಂತರ ಒಳಗಿನ ಕತೆಗಾರ ಒಬ್ಬ ಕಲಾವಿದನೂ ಹೌದು, ಚಿತ್ರ ನಿರ್ದೇಶಕನೂ ಹೌದು."
- ಜೋಗಿ  

ಜಯಂತ ಕಾಯ್ಕಣಿ ಅವರ ಪುಸ್ತಕಗಳು ರಂಗ ಶಂಕರದ ಪೇಪರ್‌ಬ್ಯಾಕ್‌ ಪುಸ್ತಕದ ಅಂಗಡಿಯಲ್ಲಿ ದೊರೆಯುತ್ತವೆ. ಕಾರ್ಯಕ್ರಮದ ನಂತರ ಜಯಂತ ಕಾಯ್ಕಿಣಿ ಅವರು ಪುಸ್ತಕಗಳಿಗೆ ಹಸ್ತಾಕ್ಷರ ನೀಡುತ್ತಾರೆ.


Upcoming events in Ranga Shankara

We don't have any upcoming events listed for this venue.
(Venue owners / event managers, to get your event listed, reach out to us.)