Nov 02 2025 to Nov 02 2025 7:30 a.m.
7 4th Main Rd, Stage 2, Domlur 560071
Winding and binding, Karnataka’s great rivers have always been more than glorious waterways. From Krishna to Kaveri, our rivers are carriers of culture, stories, and transformation. As they flow across varied landscapes, they shape and are shaped by the people, traditions, and communities they touch. Krishna to Kaveri is a two-day celebration that draws from this natural rhythm, exploring how Karnataka’s cultural life is constantly moving, adapting, and renewing itself. From classical roots to contemporary reinterpretations, this festival offers a vibrant weekend that speaks to a new generation. Expect immersive workshops, indulgent cuisines and impactful performances! Whether you’re a native Kannadiga or recently moved into Bangalore, this festival is for anyone who wants to connect more deeply with the cultural spirit of the region. Not as outsiders looking in, but as participants in a living, flowing cultural journey. Let the rivers lead. Let culture move. Let Karnataka unfold. ಬಳಸುತ್ತಾ ಬೆಸೆಯುತ್ತಾ ಬೆಳೆಸುತ್ತಾ ಸಾಗುವ ಕರ್ನಾಟಕದ ನದಿಗಳು ವೈಭವದ ಜಲಹರಿವುಗಳು ಮಾತ್ರವಲ್ಲ. ಕೃಷ್ಣೆಯಿಂದ ಕಾವೇರಿವರೆಗೆ ವ್ಯಾಪಿಸಿರುವ ನದಿಗಳು ಸಂಸ್ಖೃತಿಯ, ಕಥೆ-ಪುರಾಣಗಳ, ಪರಿವರ್ತನೆಯ ಚಲನಶೀಲ ವಾಹಕಗಳಾಗಿವೆ. ವೈವಿಧ್ಯಮಯ ಸುಂದರ ಭೂಪ್ರದೇಶಗಳ ನಡುವೆ ಮುನ್ನಡೆವ ಈ ನದಿಗಳು ಜನರನ್ನು, ಪರಂಪರೆಗಳನ್ನು, ಸಮುದಾಯಗಳನ್ನು ರೂಪಿಸುತ್ತಾ, ಪರ್ಯಾಯವಾಗಿ ರೂಪುಗೊಳ್ಳುತ್ತಾ ಸಾಗಿವೆ. ಈ ಸ್ವಾಭಾವಿಕ ಹರಿವಿನ ಲಯದಿಂದ ಹೊಮ್ಮಿರುವ ಎರಡು ದಿನಗಳ ಉತ್ಸವವೆ ‘ಕೃಷ್ಣೆಯಿಂದ ಕಾವೇರಿವರೆಗೆ ʼ. ಕರ್ನಾಟಕದ ಸಾಂಸ್ಕೃತಿಕ ಬದುಕಿನ ನಿರಂತರ ಚಲನೆಯ, ಹೊಂದಾಣಿಕೆಯ, ಪುನಶ್ಚೇತನದ ಶೋಧನೆ. ಈ ಉತ್ಸವವು ಅಭಿಜಾತ ಬೇರುಗಳಿಂದ ವರ್ತಮಾನದ ಮರುವ್ಯಾಖ್ಯಾನಗಳವರೆಗೆ ಹುರುಪಿನ ವಾರಾಂತ್ಯದಲ್ಲಿ ಹೊಸಪೀಳಿಗೆಗೆ ಒಳನೋಟಗಳನ್ನು ಒದಗಿಸಲಿದೆ. ತಲ್ಲೀನಗೊಳಿಸುವ ಕಾರ್ಯಾಗಾರಗಳು, ರುಚಿಕರ ಆಹಾರ, ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಹಬ್ಬದಲ್ಲಿ ನಿರೀಕ್ಷಿಸಬಹುದು. ನೀವು ಮೂಲ ಕನ್ನಡಿಗರಾಗಿರಿ ಅಥವಾ ಇತ್ತೀಚೆಗಷ್ಟೆ ಹೊರಗಿನಿಂದ ಬೆಂಗಳೂರಿಗೆ ಬಂದಿರುವವರೇ ಆಗಿರಿ. ಈ ನೆಲದ ಸಾಂಸ್ಕೃತಿಕ ಚೇತನದೊಂದಿಗೆ ಆಳವಾಗಿ ಬೆರೆಯುವ ಅವಕಾಶವನ್ನು ಈ ಹಬ್ಬ ನಿಮಗೆ ಒದಗಿಸುತ್ತದೆ. ಇಲ್ಲಿನ ಕಾರ್ಯಕ್ರಮಗಳನ್ನು ನೀವು ಹೊರಗಿನವರಾಗಿ ನಿಂತು ನೋಡುವ ಪ್ರೇಕ್ಷಕರಾಗದೆ ಒಂದು ಜೀವಂತ, ಸಾಂಸ್ಕೃತಿಕ ಯಾನದ ಭಾಗವಾಗಲು ಬನ್ನಿರಿ. ಮುನ್ನಡೆಸಲಿ ನದಿಗಳು. ಪ್ರವಹಿಸಲಿ ಸಂಸ್ಕೃತಿ. ಗೋಚರವಾಗಲಿ ಕರ್ನಾಟಕದ ಸಿರಿ ವೈಭವ! Day 2 Schedule: 7:30 AM – 9:00 AM: Yoga in Karnataka Yoga Practice and History with Medha Bhaskar | Terrace 10:00 AM – 11:30 AM: Songs from the Banks of Krishna and Kaveri A Concert with Chandana Bala Kalyan | Amphitheatre 11:00 AM – 12:30 PM: Children’s Storytelling Session Library 11:30 PM – 1:00 PM: 50 Years of Sandalwood Kannada Cinema with SN Sreenivasa Murthy | Auditorium 2:00 PM – 3:30 PM: Kannada Calligraphy Lettering Workshop with Manjunath of Akshara Type Studio | Boardroom 4:00 PM – 5:30 PM: Bhavageethe Classical Music Concert with Supriya Raghunandan | Auditorium 4:00 PM – 5:30 PM: Chittara Folk Art for Kids Children’s Workshop with Geetha Bhat | Library 5:00 PM – 6:30 PM: Kannada Calligraphy Lettering Workshop with Manjunath of Akshara Type Studio | Boardroom 5:30 PM – 7:00 PM: History of Kannada Theatre Hall 1 7:00 PM – 8:30 PM: Vasu Dixit Collective Auditorium