Dec 06 2024 to Dec 06 2024 7 p.m.
EVENT HAS ENDED
Price: 0 onwards Book/Buy
near Post Office, 36, 9th Main, B V Karanth Road, near Post Office, 9th Main Road, Banashankari Stage II, Banashankari, Bengaluru 560070
ಉಪೋತ್ಸವದ ಕುರಿತು: ಗಲ-ಗಲ-ಗದ್ದಲ ಗಲ-ಗಲ-ಗದ್ದಲ (#3G) ಎನ್ನುವುದು ಕರ್ನಾಟಕದ ಸಾಂಸ್ಕೃತಿಕ ವೈಭವದ ಸಂಭ್ರಮ! ಸಂಗೀತ, ನೃತ್ಯ, ರಂಗಭೂಮಿ ಹಾಗೂ ಇನ್ನಷ್ಟು ಕಲಾ ಪ್ರಕಾರಗಳ ಮೂಲಕ ನಮ್ಮ ಅಮೂಲ್ಯ ಪರಂಪರೆಯ ಆಚರಣೆ. ಬಿಎಲ್ಆರ್ ಹುಬ್ಬಾದ ಭಾಗವಾಗಿ ಲೇಖಾ ನಾಯ್ಡು ರೂಪಿಸಿರುವ ಈ ಹಬ್ಬದಲ್ಲಿ ಕನ್ನಡದ ಕಂಪು, ನಾಡಿನ ನಾದ ಮತ್ತು ಸಂಪ್ರದಾಯದ ಸಾರ ಮೊಳಗುತ್ತದೆ.
About the Sub-Festival
Gala-Gala-Gaddala (#3G) is a cultural carnival celebrating Karnataka's rich heritage through music, dance, theatre, and more! Curated by Lekha Naidu for BLR Hubba, this festival embodies joy, tradition, and Karnataka's Spirit.
About the Performance:
Experience a landmark achievement in Indian puppetry—the first-ever theatrical presentation of Swami Vivekananda's life through the mesmerising art of rod and string puppetry. This groundbreaking production artfully weaves Karnataka's time-honoured puppetry traditions with contemporary narrative techniques to illuminate the life and teachings of one of India's most revered spiritual luminaries. ### Presented by the distinguished Rangaputhali Puppeteers, under the skilled direction of M.R. Srinivas and M.R. Vijay, who carry forward the illustrious legacy of Sangeet Natak Akademi awardee Sri M.R. Ranganatha Rao. Their artistic mastery harmoniously combines traditional rod and string puppetry, classical music, dramatic storytelling and artistic innovation. ###
This extraordinary theatrical experience welcomes audiences of all ages, creating a harmonious blend of cultural heritage, spiritual wisdom and artistic excellence.
ಭಾರತೀಯ ಬೊಂಬೆಯಾಟ ಕಲೆಯಲ್ಲಿ ಒಂದು ಮೈಲಿಗಲ್ಲಿನಂತೆ - ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಮೊದಲ ಬಾರಿಗೆ ಸೂತ್ರ-ಸಲಾಕೆ ಬೊಂಬೆಯಾಟದ ಮೋಹಕ ಕಲೆಯ ಮೂಲಕ ರಂಗದ ಮೇಲೆ ಪ್ರಸ್ತುತಪಡಿಸಲಾಗುತ್ತಿದೆ. ಈ ಅಪೂರ್ವ ಪ್ರಯೋಗವು ಕರ್ನಾಟಕದ ಸಾಂಪ್ರದಾಯಿಕ ಬೊಂಬೆಯಾಟ ಕಲೆಯನ್ನು ಸಮಕಾಲೀನ ಕಥನ ಶೈಲಿಯೊಂದಿಗೆ ಬೆಸೆದು, ಭಾರತದ ಅತ್ಯಂತ ಪೂಜ್ಯ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರ ಜೀವನ ಮತ್ತು ಬೋಧನೆಗಳನ್ನು ಬೆಳಕಿಗೆ ತರುತ್ತದೆ. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಎಂ.ಆರ್. ರಂಗನಾಥ ರಾವ್ ಅವರ ಶ್ರೇಷ್ಠ ಪರಂಪರೆಯನ್ನು ಮುಂದುವರೆಸುತ್ತಿರುವ ಎಂ.ಆರ್. ಶ್ರೀನಿವಾಸ್ ಮತ್ತು ಎಂ.ಆರ್. ವಿಜಯ್ ಅವರ ನಿರ್ದೇಶನದಲ್ಲಿ ಖ್ಯಾತ ರಂಗಪುತ್ಥಳಿ ಬೊಂಬೆಯಾಟಗಾರರು ಪ್ರಸ್ತುತಪಡಿಸುತ್ತಿದ್ದಾರೆ. ಅವರ ಕಲಾ ಪ್ರಾವೀಣ್ಯವು ಸಾಂಪ್ರದಾಯಿಕ ಸೂತ್ರ-ಸಲಾಕೆ ಬೊಂಬೆಯಾಟ, ಶಾಸ್ತ್ರೀಯ ಸಂಗೀತ, ನಾಟಕೀಯ ಕಥನ ಮತ್ತು ಕಲಾತ್ಮಕ ನವೀನತೆಯನ್ನು ಸುಂದರವಾಗಿ ಮೇಳೈಸುತ್ತದೆ. ಎಲ್ಲ ವಯೋಮಾನದವರಿಗೂ ಸೂಕ್ತವಾದ ಈ ಅಪೂರ್ವ ರಂಗಾನುಭವವು ಸಾಂಸ್ಕೃತಿಕ ಪರಂಪರೆ, ಆಧ್ಯಾತ್ಮಿಕ ಜ್ಞಾನ ಮತ್ತು ಕಲಾತ್ಮಕ ಶ್ರೇಷ್ಠತೆಯ ಸುಂದರ ಸಮ್ಮಿಳನವಾಗಿದೆ.
We don't have any upcoming events listed for this venue.
(Venue owners / event managers, to get your event listed, reach out to us.)