Home | others | Vivek Shanbagh at Ranga Shankara's 'Pustaka Sambhrama'

Vivek Shanbagh at Ranga Shankara's 'Pustaka Sambhrama'

Details

Oct 17 2021 to Oct 17 2021 noon

EVENT HAS ENDED

Where

Ranga Shankara

36/2, 8th Cross Rd, R K Colony, 2nd Phase, J. P. Nagar 560078

Event Description

ವಿವೇಕ ಶಾನಭಾಗ

ವಿವೇಕ ಶಾನಭಾಗರ ಐದು ಕಥಾ ಸಂಕಲನಗಳು, ಐದು ಕಾದಂಬರಿಗಳು ಮತ್ತು ಮೂರು ನಾಟಕಗಳು ಪ್ರಕಟವಾಗಿವೆ. ಜೊತೆಯಲ್ಲೇ 'ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ' ಮತ್ತು 'Sirigannada - An Anthology of Contemporary Kannada Writings' ಎಂಬ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಯು ಆರ್‌ ಅನಂತಮೂರ್ತಿಯವರ 'ಹಿಂದುತ್ವ ಮತ್ತು ಹಿಂದ್‌ ಸ್ವರಾಜ್‌' ಎಂಬ ಕೃತಿಯ ಇಂಗ್ಲಿಷ್‌ ಆವೃತ್ತಿಯ ಸಹ-ಅನುವಾದಕರಾಗಿದ್ದಾರೆ. ಇವರ ಕೃತಿಗಳು ಇಂಗ್ಲಿಷ್‌ ಸೇರಿದಂತೆ ಅನೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. 'ಘಾಚರ್‌ ಘೋಚರ್‌' ಕೃತಿಯು ಜಗತ್ತಿನ ಹದಿನೆಂಟು ಭಾಷೆಗಳಿಗೆ ಅನುವಾದಗೊಂಡು ಬಹು ಚರ್ಚಿತವಾಗಿದೆ. ದೇಶಕಾಲ ಎಂಬ ಸಾಹಿತ್ಯಕ ತ್ರೈಮಾಸಿಕವನ್ನು ಏಳು ವರ್ಷಗಳ ಕಾಲ ಸಂಪಾದಿಸಿದ ವಿವೇಕ, ಪ್ರಜಾವಾಣಿ ಹಾಗೂ ಭಾವನಾ ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದರು. 'ಪ್ರಜಾವಾಣಿ-ದೇಶ ಕಾಲ ಸಾಹಿತ್ಯ ಪುರವಣಿ'ಯ ಆರಂಭದ ವರ್ಷದಲ್ಲಿ ಸಂಪಾದಕರಾಗಿದ್ದರು. ಅಮೇರಿಕದ ಅಯೋವಾ ವಿಶ್ವವಿದ್ಯಾಲಯದ ಇಂಟರ್‌ನ್ಯಾಶನಲ್‌ ರೈಟಿಂಗ್‌ ಪ್ರೋಗ್ರಾಮಿನ 2016 ನೇ ವರ್ಷದ ಆನರರಿ ಫೆಲೋ ಆಗಿದ್ದರು. ಪ್ರಸ್ತುತ ಅಶೋಕ ಯೂನಿವರ್ಸಿಟಿಯ ಇಂಗ್ಲಿಷ್‌ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ.

ಜೋಗಿ

ಕನ್ನಡದ ಓದುಗರಿಗೆ 'ಜೋಗಿ'ಎಂದೇ ಪರಿಚಯವಿರುವ ಗಿರೀಶ್‌ರಾವ್‌ ಹತ್ವಾರ್ ಕನ್ನಡದ ಅತ್ಯಂತ ಜನಪ್ರಿಯ ಲೇಖಕರಲ್ಲಿ ಒಬ್ಬರು. ಜಾನಕಿಯಾಗಿಯೂ ಇವರ ಪರಿಚಯವಿದೆ. ವೃತ್ತಿಯಲ್ಲಿ ಪತ್ರಕರ್ತರು. ಹಾಯ್‌  ಬೆಂಗಳೂರು ಪತ್ರಿಕೆಯ 'ರವಿ ಕಾಣದ್ದು', ಮತ್ತು 'ಜಾನಕಿ ಕಾಲಂ' ಹಲವು ವರ್ಷಗಳ ಕಾಲ ಪ್ರಕಟಗೊಂಡ ಅವರ ಯಶಸ್ವೀ ಅಂಕಣಗಳು. ಹಲವಾರು ಕಾದಂಬರಿಗಳು, ಕಥಾಸಂಕಲನಗಳು, ನಾಟಕಗಳು, ಸಾಹಿತ್ಯ ಕುರಿತಾದ ಪುಸ್ತಕಗಳು ಇವರ ಹೆಸರಿನಲ್ಲಿವೆ. ಪ್ರಸ್ತುತ ಕನ್ನಡಪ್ರಭ ಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಿಕೋದ್ಯಮ, ಸಾಹಿತಿ, ಅಂಕಣಕಾರ, ಚಿತ್ರಸಾಹಿತಿ, ಟೀವಿ ಚಿತ್ರಸಾಹಿತಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅಪಾರ ಯಶಸ್ಸು ಪಡೆದಿದ್ದಾರೆ. ಇವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.


Upcoming events in Ranga Shankara

We don't have any upcoming events listed for this venue.
(Venue owners / event managers, to get your event listed, reach out to us.)